- ಎಂಎಸ್ ಧೋನಿ ಹಿಡಿದಿರುವುದು ಬ್ಯಾಟಲ್ಲ, ಖಡ್ಗ ಎಂದು ಹೇಳಿದ ಅಂಬಾಟಿ ರಾಯುಡು ಅವರ ಹೇಳಿಕೆಗೆ ಅಪಹಾಸ್ಯ ಮಾಡಿದ ನವಜೋತ್ಸಿಂಗ್ ಸಿಧು ಅವರು, 'ನಿಮ್ಮ ಆರಾಧ್ಯ ದೈವ ಊಸರವಳ್ಳಿ ಎಂದು ಹೇಳಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
- ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಗೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಸಜ್ಜಾಗಿದೆ. ಉಭಯ ತಂಡಗಳ ನಡುವಿನ ಈ ಹಿಂದಿನ ಮುಖಾಮುಖಿಯಲ್ಲಿ ಐಪಿಎಲ್ ಜಿಟಿ ತಂಡ 5 ಗೆಲುವುಗಳೊಂದಿಗೆ ಪ್ರಾಬಲ್ಯ ಮೆರೆದಿದೆ. ರಾಜಸ್ಥಾನ್ ರಾಯಲ್ಸ್ ಒಮ್ಮೆ ಮಾತ್ರ ಗೆದ್ದಿದೆ.
- ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಪಂಜಾಬ್ ಕಿಂಗ್ಸ್, 6 ವಿಕೆಟ್ ಕಳೆದುಕೊಂಡು 219 ರನ್ ಗಳಿಸಿತು. ಬೃಹತ್ ಮೊತ್ತ ಚೇಸಿಂಗ್ ನಡೆಸಿದ ಚೆನ್ನೈ, 5 ವಿಕೆಟ್ ಕಳೆದುಕೊಂಡು 201 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಇದರೊಂದಿಗೆ ಪ್ರಸಕ್ತ ಆವೃತ್ತಿಯಲ್ಲಿ ಸತತ ನಾಲ್ಕನೇ ಸೋಲು ಕಂಡಿತು.
- ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಐಪಿಎಲ್ನಲ್ಲಿ ಈವರೆಗೆ 6 ಬಾರಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಜಿಟಿ ಐದು ಪಂದ್ಯಗಳಲ್ಲಿ ಗೆದ್ದರೆ, ರಾಜಸ್ಥಾನ್ ರಾಯಲ್ಸ್ ಒಂದು ಬಾರಿ ಮಾತ್ರ ಜಯಗಳಿಸಿದೆ.
- ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಲಕ್ನೋ ಸೂಪರ್ ಜೈಂಟ್ಸ್, ಭರ್ಜರಿ ಬ್ಯಾಟಿಂಗ್ ಮಾಡಿ 238 ರನ್ ಪೇರಿಸಿತು. ಚೇಸಿಂಗ್ ನಡೆಸಿದ ಕೆಕೆಆರ್ 234 ರನ್ ಗಳಿಸಲಷ್ಟೇ ಶಕ್ತವಾಯ್ತು. ಇದರೊಂದಿಗೆ 4 ರನ್ಗಳಿಂದ ಸೋಲು ಕಂಡಿತು.
- ಬೆಂಗಳೂರಿನಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 40 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಕುಳಿತು ಪಂದ್ಯ ವೀಕ್ಷಿಸಬಹುದು. ಪಂದ್ಯಗಳು ನಡೆಯುವಾಗ ಇಲ್ಲಿ ಇಂಟರ್ನೆಟ್ ಸಮಸ್ಯೆ ಇದೆ ಎಂಬುದು ಈವರೆಗಿನ ಸಮಸ್ಯೆಯಾಗಿತ್ತು. ಆದರೆ 5ಜಿ ವೇಗದ ನೆಟ್ವರ್ಕ್ ಸೇವೆಗೆ ಬೇಕಾದ ವ್ಯವಸ್ಥೆಯನ್ನು ರಿಲಯನ್ಸ್ ಜಿಯೋ ಮಾಡುತ್ತಿದೆ.
- ಮುಂಬೈ ಮತ್ತು ಆರ್ಸಿಬಿ ನಡುವಿನ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಆತ್ಮೀಯತೆ ಅಭಿಮಾನಿಗಳಿಗೆ ಇಷ್ಟವಾಗಿದೆ. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
- 45 ವರ್ಷ ವಯಸ್ಸಿನಲ್ಲಿ ರೋಹನ್ ಬೋಪಣ್ಣ ವಿಶೇಷ ದಾಖಲೆ ಮಾಡಿದ್ದಾರೆ. ಎಟಿಪಿ 1000 ಟೂರ್ನಮೆಂಟ್ನಲ್ಲಿ ಪಂದ್ಯವನ್ನು ಗೆದ್ದು ಇತಿಹಾಸ ನಿರ್ಮಿಸಿದ್ದಾರೆ. ಎಟಿಪಿ 1000 ಟೂರ್ನಮೆಂಟ್ ಗೆದ್ದ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ.
- ಇತ್ತೀಚೆಗಷ್ಟೇ ಚೆಪಾಕ್ನಲ್ಲಿ ಸಿಎಸ್ಕೆ ವಿರುದ್ಧ ಗೆದ್ದು 17 ವರ್ಷಗಳ ಸೋಲಿನ ಕವಚ ತೆರೆದಿದ್ದ ಆರ್ಸಿಬಿ, ಇದೀಗ ಮುಂಬೈನಲ್ಲಿ 9 ವರ್ಷಗಳ ಗೆಲುವಿನ ಬರ ನೀಗಿಸಿದೆ. ಪಂದ್ಯದುದ್ದಕ್ಕೂ ವಾಂಖೆಡೆಯಲ್ಲಿ ಆರ್ಸಿಬಿ ಅಭಿಮಾನಿಗಳದ್ದೇ ಘೋಷವಾಕ್ಯಗಳ ನಡುವೆ, ಆರ್ಸಿಬಿಯು ಎಂಐ ತಂಡದ ಗರ್ವ ಮುರಿದಿದೆ.
- ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ನಡುವಿನ ಪಂದ್ಯ ಹಲವು ಕಾರಣಗಳಿಂದ ವಿಶೇಷ ಎನಿಸಿತು. ಪಂದ್ಯದ ಮೂಲಕ ಮುಂಬೈ ತಂಡಕ್ಕೆ ಪ್ರಸಕ್ತ ಆವೃತ್ತಿಯಲ್ಲಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಪದಾರ್ಪಣೆ ಮಾಡಿದರು. ಜಸ್ಪ್ರೀತ್ ಬುಮ್ರಾ ಎಸೆತವನ್ನು ಎದುರಿಸಿದ ಕೊಹ್ಲಿ, ಮೊದಲ ಎಸೆತದಲ್ಲೇ ಆಕರ್ಷಕ ಸಿಕ್ಸರ್ ಬಾರಿಸಿದರು.
- ಕೆಕೆಆರ್ ಮತ್ತು ಲಕ್ನೋ ತಂಡಗಳ ನಡುವಿನ ಪಂದ್ಯವು ಏಪ್ರಿಲ್ 6ರ ಭಾನುವಾರವೇ ನಡೆಯಬೇಕಿತ್ತು. ಕೋಲ್ಕತ್ತಾದಲ್ಲಿ ನಡೆಯಬೇಕಿದ್ದ ಪಂದ್ಯವನ್ನು ರಾಮನವಮಿ ಹಿನ್ನೆಲೆಯಲ್ಲಿ ಮಂಗಳವಾರಕ್ಕೆ ಮುಂದೂಡಲಾಗಿದೆ. ಅದೇ ಸ್ಥಳದಲ್ಲಿ ಬದಲಾದ ದಿನ ಪಂದ್ಯ ನಡೆಯುತ್ತಿದೆ.
- ಐಪಿಎಲ್ 18ನೇ ಆವೃತ್ತಿಯಲ್ಲಿ ಏಪ್ರಿಲ್ 8ರ ಮಂಗಳವಾರ ಎರಡು ಪಂದ್ಯಗಳು ನಡೆಯುತ್ತಿವೆ. ಕೋಲ್ಕತ್ತಾದಲ್ಲಿ ನಡೆಯಲಿರುವ ಪಂದ್ಯವು ರಾಮನವಮಿಯಂದು ನಡೆಯಬೇಕಿತ್ತು. ಅದನ್ನು ನಾಳೆಗೆ ಮುಂದೂಡಲಾಗಿದೆ. ಪಂದ್ಯಕ್ಕೆ ಸಂಬಂಧಿಸಿದ ಪ್ರಮುಖ 10 ಅಂಶಗಳನ್ನು ನೋಡೋಣ.
- ಪಾಕಿಸ್ತಾನ ಕ್ರಿಕೆಟ್ನ ಕ್ಷಿಪ್ರ ಅವನತಿಗೆ ಐಪಿಎಲ್ ಕಾರಣ ಎಂದು ಮಾಜಿ ನಾಯಕ ರಶೀದ್ ಲತೀಫ್ ಆರೋಪಿಸಿದ್ದಾರೆ. ಪಾಕಿಸ್ತಾನ ಆಟಗಾರರಿಗೆ ಐಪಿಎಲ್ನಲ್ಲಿ ಆಡುವ ಅವಕಾಶ ಇಲ್ಲ. ಇದರಿಂದ ಜಾಗತಿಕ ಬಲಿಷ್ಠ ಆಟಗಾರರೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.
- MI vs RCB: ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಆರ್ಸಿಬಿ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಎಂಐ ತಂಡದ ಆಟಗಾರರಾದ ಜಸ್ಪ್ರೀತ್ ಬುಮ್ರಾ ಹಾಗೂ ರೋಹಿತ್ ಶರ್ಮಾ ಆಡುವ ಕುರಿತು ಕೋಚ್ ಮಹೇಲಾ ಜಯವರ್ಧನೆ ಅಪ್ಡೇಟ್ ನೀಡಿದ್ದಾರೆ.
- GT vs SRH: ಚೇಸಿಂಗ್ ವೇಳೆ ಹೈದರಾಬಾದ್ ಪಿಚ್ ಸ್ವಲ್ಪ ಭಿನ್ನವಾಗಿ ವರ್ತಿಸಿದರೂ, ಆರಂಭಿಕ ಆಘಾತದಿಂದ ಬೇಗನೆ ಚೇತರಿಸಿಕೊಂಡ ಗುಜರಾತ್ ಟೈಟನ್ಸ್ ಸುಲಭವಾಗಿ ರನ್ ಚೇಸ್ ಪೂರ್ಣಗೊಳಿಸಿತು. ಇದರೊಂದಿಗೆ ಐಪಿಎಲ್ ಅಂಕಪಟ್ಟಿಯಲ್ಲಿಯೂ ಬಡ್ತಿ ಪಡೆಯಿತು.
- FCG vs BFC: ಸುನಿಲ್ ಛೆಟ್ರಿ ನಿರ್ಣಾಯಕ ಗೋಲ್ ನೆರವಿಂದ ಬೆಂಗಳೂರು ಎಫ್ಸಿ ತಂಡವು ಎಫ್ಸಿ ಗೋವಾವನ್ನು ಒಟ್ಟು 3-2 ಗೋಲುಗಳ ಅಂತರದಿಂದ ಸೋಲಿಸಿ ಇಂಡಿಯನ್ ಸೂಪರ್ ಲೀಗ್ನ ಫೈನಲ್ ಪ್ರವೇಶಿಸಿದೆ.
- ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯಕ್ಕೂ ಮುನ್ನ ವೇಗಿ ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಅದರ ಬೆನ್ನಲ್ಲೇ ಆಡುವ ಬಳಗದ ಆಯ್ಕೆಗೆ ಲಭ್ಯವಿರಲಿದ್ದಾರೆ ಎಂದು ತಂಡದ ಕೋಚ್ ಮಹೇಲಾ ಜಯವರ್ಧನೆ ತಿಳಿಸಿದ್ದಾರೆ.
- ಗಾಯದಿಂದಾಗಿ ಸುದೀರ್ಘ ವಿರಾಮದಲ್ಲಿರುವ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ, ಕೊನೆಗೂ ಮುಂಬೈ ಇಂಡಿಯನ್ಸ್ ತಂಡ ಸೇರಿಕೊಂಡಿದ್ದಾರೆ. ಆದರೆ ಆರ್ಸಿಬಿ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಅವರು ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ ಇದೆ.
- ಸಿಎಸ್ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವಿನ ಪಂದ್ಯದ ಸಮಯದ ಒಂದು ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಎಂಎಸ್ ಧೋನಿ ಅವರ ಪತ್ನಿ ಸಾಕ್ಷಿ, ತಮ್ಮ ಮಗಳೊಂದಿಗೆ ಮಾತನಾಡುತ್ತಿರುವುದು ಇದರಲ್ಲಿದೆ. ಅವರು ಧೋನಿ ನಿವೃತ್ತಿಯ ಸುಳಿವು ನೀಡಿದ್ದಾರೆ ಎನ್ನಲಾಗುತ್ತಿದೆ.
- ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್, 4 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತು. ಚೇಸಿಂಗ್ ನಡೆಸಿದ ಪಂಜಾಬ್ 9 ವಿಕೆಟ್ ಕಳೆದುಕೊಂಡು 155 ರನ್ ಗಳಿಸಿತು. ಈ ಬಾರಿ ತವರಿನಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಪಂಜಾಬ್ ಮುಗ್ಗರಿಸಿದೆ.